ಸ್ವಚ್ಛ ಬೆಂಗಳೂರು ಕಾರ್ಯಕ್ರಮವನ್ನು ಜಾರಿಗೊಳಿಸಬೇಕಿದೆ, ಅದಕ್ಕಾಗಿ ಒಂದು ಸಹಾಯವಾಣಿಯನ್ನು ಶೀಘ್ರದಲ್ಲೇ ಆರಂಭಿಸುತ್ತೇವೆ, ಸಾರ್ವಜನಿಕರು ಎಲ್ಲೇ ಕಸ ಬಿಸಾಡಿದರೂ ಒಂದು ವಾರದಲ್ಲಿ ಅದನ್ನು ಕ್ಲೀನ್ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಹಾಗೆಯೇ ರಸ್ತೆಗುಂಡಿಗಳನ್ನು ಮುಚ್ಚಿ ನಗರದ ರಸ್ತೆಗಳನ್ನು ನೇರಗೊಳಿಸಲು ಆದ್ಯತೆಯ ಮೇರೆಗೆ ಶಾಸಕರಿಗೆ ಅನುದಾನಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು.