ಪ್ರವಾಸಿಯೊಬ್ಬರು ರೀಲ್ಸ್ಗಾಗಿ ಹಂಪಿಯ (Hampi) 14ನೇ ಶತಮಾನದ ಸ್ಮಾರಕವನ್ನೇರಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಇದೀಗ ಅಪರಿಚಿತ ಪ್ರವಾಸಿಗನ ವಿರುದ್ಧ ಭಾರತೀಯ ಪುರಾತತ್ವ (Archaeological Survey of India) ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಹಂಪಿ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಹುಡುಕಾಟದಲ್ಲಿದ್ದಾರೆ.