ಹನುಮ ಜಯಂತಿಯಂದು ಹನುಮನಿಗೆ ನಮನ ಸಲ್ಲಿಸಿದ ಪ್ರಲ್ಹಾದ್ ಜೋಶಿ: ಕರ್ನಾಟಕದ ವಿವಿಧೆಡೆಗಳಲ್ಲಿ ಇಂದು ಹನುಮ ಜಯಂತಿ ಆಚರಿಸಲಾಯಿತು. ಬೆಳಗಾವಿ ಜಿಲ್ಲೆಯ ಕುಲಗೋಡು ಗ್ರಾಮದಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ತೆರಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪೂಜೆ ಸಲ್ಲಿಸಿದರು. ನಂತರ ರಥ ಎಳೆದು ಹನುಮನ ಸೇವೆ ಮಾಡಿದರು.