ತನ್ನ ಪ್ರಕರಣವನ್ನೇ ತೆಗೆದುಕೊಂಡಿದ್ದೇಯಾದರೆ 2008 ರಿಂದ ಶಾಸಕನಾಗಿದ್ದೆ, ಕಳೆದ ಲೋಕ ಸಭಾ ಚುನಾವಣೆ ಸಮಯದಲ್ಲಿ ಹಿರಿಯ ನಾಯಕರು ಸಂಸತ್ ಸ್ಥಾನಕ್ಕೆ ಸ್ಪರ್ಧಿಸುವಂತೆ ಹೇಳಿದರು, ಮರುಮಾತಾಡದೆ ನಾಮಪತ್ರ ಸಲ್ಲಿಸಿದೆ ಮತ್ತು ಜನರ ಆಶೀರ್ವಾದದಿಂದ ಆಯ್ಕೆ ಕೂಡ ಆದೆ, ತಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ, ತನಗೆ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ತುಕಾರಾಮ್ ಹೇಳಿದರು.