ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 4-5 ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಯ ಪರ ಮತ ಚಲಾಯಿಸುತ್ತಾರೆ ಅಂತ ಆವರು ಅಂದುಕೊಂಡಿದ್ದರು, ಅದರೆ ಪಕ್ಷದ ಎಲ್ಲ 19 ಶಾಸಕರು ತಮ್ಮ ಅಭ್ಯರ್ಥಿಗೆ ವೋಟು ಮಾಡಿ ಪಕ್ಷದಲ್ಲಿರುವ ಒಗ್ಗಟ್ಟು ಮತ್ತು ಶಿಸ್ತನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಜ್ವಲ್ ಹೇಳಿದರು. ಆದಾಗ್ಯೂ ಚುನಾವಣೆ ಸಮಯದಲ್ಲಿ ಚಿಕ್ಕಪುಟ್ಟ ಪ್ರಮಾದಗಳಾಗಿವೆ, ಮುಂಬರುವ ದಿನಗಳಲ್ಲಿ ಅದನ್ನು ಸರಿಪಡಿಸಲಾಗುವುದು ಎಂದು ಪ್ರಜ್ವಲ್ ಹೇಳಿದರು.