ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​

ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರಿನಲ್ಲಿ ಒಂಟಿ ಸಲಗವೊಂದು ಹುಲಿಯನ್ನು ಅಟ್ಟಾಡಿಸಿದ ಅಪರೂಪದ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಲಗದ ಧೈರ್ಯಕ್ಕೆ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸಫಾರಿಗೆ ತೆರಳಿದ್ದ ವೇಳೆ ಕಂಡ ಈ ಅಪರೂಪದ ಘಟನೆಯಿಂದ ಪ್ರವಾಸಿಗರು ಖುಷ್​ ಆಗಿದ್ದಾರೆ.