ಉಡ್ಡಯನದ 125 ದಿನಗಳ ನಂತರ ಆದಿತ್ಯ ಎಲ್-1 ಅಂತರಿಕ್ಷದಲ್ಲಿ ನಿರ್ಧಾರಿತ ಸ್ಥಳ (ಎಲ್1 ಪಾಯಿಂಟ್) ತಲುಪಿ ಸೂರ್ಯನ ಅಧ್ಯಯನ ಆರಂಭಿಸಲಿದೆ ಎಂದು ಸೋಮನಾಥ ಹೇಳಿದರು. ಚಂದ್ರನಲ್ಲಿ ಲ್ಯಾಂಡ್ ಆಗಿರುವ ಪ್ರಗ್ಯಾನ್ ಆದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ ಅವರು, ಇಸ್ರೋದ ಮುಂದಿನ ಮಿಷನ್ ವಿಎಸ್ಎಲ್ವಿ ಲಾಂಚ್ ಆಗಿದ್ದು ಅದು ಅಕ್ಟೋಬರ್ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಹಾರಿಬಿಡಲಾಗುವುದು ಎಂದರು.