ಪಟ್ಟಿಯನ್ನು ತೆಗೆದುಕೊಂಡು ದೆಹಲಿಗೆ ಹೋಗುತ್ತೇವೆ, ಅಭ್ಯರ್ಥಿಗಳ ಹೆಸರನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಪರಾಮರ್ಶೆ ನಡೆಸುತ್ತದೆ. ಕೆಪಿಸಿಸಿ ನೀಡಿದ ಪಟ್ಟಿಯನ್ನೇ ಸಿಇಸಿ ಅಂತಿಮಗೊಳಿಸುತ್ತದೆ ಅಂತಿಲ್ಲ, ಅವರು ಕೆಲ ಹೆಸರುಗಳನ್ನು ತೆಗೆದುಹಾಕಿ ತಮಗೆ ಸರಿಯೆನಿಸಿದ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಬಹುದು ಮತ್ತು ಅಂತಿಮ ಪಟ್ಟಿಯನ್ನು ಸಹ ವರಿಷ್ಠರೇ ಘೋಷಣೆ ಮಾಡುತ್ತಾರೆ ಎಂದು ಶಿವಕುಮಾರ್ ಹೇಳಿದರು.