ಬಿಗ್ ಬಾಸ್ ಮನೆಯಲ್ಲಿ ಕುಸ್ತಿ ಅಖಾಡ; ಮತ್ತದೇ ಜಗಳ, ಕಿತ್ತಾಟ

‘ಬಿಗ್ ಬಾಸ್’ ಮನೆಯಲ್ಲಿ ಹಳ್ಳಿ ಟಾಸ್ಕ್ ನೀಡಲಾಗುತ್ತಿದೆ. ಅಲ್ಲಿ ಸಾಕಷ್ಟು ಕಿತ್ತಾಟ ನಡೆಯುತ್ತಿದೆ. ಸಾಕಷ್ಟು ವಾಗ್ವಾದಗಳು ಕೂಡ ಆಗಿವೆ. ಈಗ ಬಿಗ್ ಬಾಸ್ ಕುಸ್ತಿ ಅಖಾಡವನ್ನೇ ಸಿದ್ಧಡಿಸಿದ್ದಾರೆ. ಇಲ್ಲಿಯೂ ಜಗಳ ಏರ್ಪಟ್ಟಿದೆ. ವಿನಯ್ ಗೌಡ ಹಾಗೂ ತನಿಷಾ ಕುಪ್ಪಂಡ ಮಧ್ಯೆ ವಾಗ್ವಾದ ನಡೆದಿದೆ. ವಿನಯ್ ಹೋದಲ್ಲೆಲ್ಲ ಬರೀ ಜಗಳವೇ ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. ಅವರು ಬಳಕೆ ಮಾಡುವ ಶಬ್ದದ ಬಗ್ಗೆಯೂ ಅನೇಕರಿಗೆ ಅಸಮಾಧಾನ ಇದೆ. ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಅನೇಕರು ವ್ಯಕ್ತವಾಗಿದೆ.