ನೆಲಮಂಗಲದ ಮಾದಾವರದಲ್ಲಿರುವ ವಿನಾಯಕ ಎಂಆರ್ಪಿ ಬಾರ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಬೆಳಗ್ಗೆಯೇ ಬಾರ್ ತೆರೆದು ಎಂಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಟಿವಿ9 ವರದಿಯ ನಂತರ ಪೊಲೀಸರು ದಾಳಿ ನಡೆಸಿ, ಸಿಬ್ಬಂದಿಯನ್ನು ಬಂಧಿಸಿ, ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.