ರಾಣಾ ಪ್ರತಾಪ್, ಶಿವಾಜಿ ಮಹಾರಾಜ್ ನಮ್ಮ ಹೀರೋಗಳೇ ವಿನಃ ಔರಂಬಜೇಬನಲ್ಲ; ರಾಜನಾಥ್ ಸಿಂಗ್

ಔರಂಗಜೇಬ ಒಬ್ಬ ವೀರ ಎಂದು ಭಾವಿಸುವವರು ಮೊಘಲ್ ಚಕ್ರವರ್ತಿ ಒಬ್ಬ ಧರ್ಮಾಂಧ, ಕ್ರೂರ ಆಡಳಿತಗಾರ ಎಂದು ಬರೆದ ಪಂಡಿತ್ ಜವಾಹರಲಾಲ್ ನೆಹರು ಅವರ ಬರಹವನ್ನೂ ಓದಬೇಕಿತ್ತು. ಅಂತಹ ವ್ಯಕ್ತಿ ವೀರನಾಗಲು ಸಾಧ್ಯವಿಲ್ಲ. ಸ್ವಾತಂತ್ರ್ಯಾನಂತರದ ಎಡಪಂಥೀಯ ಒಲವನ್ನು ಹೊಂದಿರುವ ಇತಿಹಾಸಕಾರರು ರಾಣಾ ಪ್ರತಾಪ್ ಮತ್ತು ಶಿವಾಜಿ ಮಹಾರಾಜರಿಗೆ ಸರಿಯಾದ ಮನ್ನಣೆ ನೀಡಲಿಲ್ಲ ಆದರೆ ಔರಂಗಜೇಬನನ್ನು ಶ್ಲಾಘಿಸಿದರು" ಎಂದು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಟೀಕಿಸಿದ್ದಾರೆ.