ಇಂದು ಬೆಳಗ್ಗೆಯಿಂದಲೆ ಜನಸ್ಪಂದನಾ ಹೆಸರಿನಲ್ಲಿ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ (Janata Darshan) ಕಾರ್ಯಕ್ರಮ ನಡೆಸಿದ್ದಾರೆ. ಅದರಂತೆ, ತನ್ನ ಜಮೀನನ್ನು ಒತ್ತುವರಿ ಮಾಡಿಕೊಂಡ ಬಗ್ಗೆ ರಾಮನಗರ ತಾಲೂಕಿನ ದುಗ್ಗನಹಳ್ಳಿ ಗ್ರಾಮದ ವೃದ್ಧೆ ರಾಜಮ್ಮ ಅವರು ಸಿಎಂ ಮುಂದೆ ಅಳಲುತೋಡಿಕೊಂಡರು. ಅದರಂತೆ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಜಮೀನು ಬಿಡಿಸಿಕೊಂಡುವಂತೆ ಸೂಚಿಸಿದರು.