ಇವು ವಜ್ರಗಳಾ ಅಥವಾ ಜಸ್ಟ್​​ ಬಣ್ಣದ ಕಲ್ಲುಗಳಾ?

ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಕರ್ನೂಲು ಜಿಲ್ಲೆಯ ರೈತರು, ಜನ ಸಾಮಾನ್ಯರು ಹೊಲಗಳಿಗೆ ನುಗ್ಗುತ್ತಾರೆ. ಬೆಳೆಗಳನ್ನು ಬೆಳೆಯಲು ಅಲ್ಲ, ಆದರೆ ವಜ್ರಗಳನ್ನು ಬೇಟೆಯಾಡಲು! ಅಲ್ಲಿ ಮಳೆಯಾದರೆ ವಜ್ರಗಳು ಸಿಗುತ್ತವಂತೆ. ಅದಕ್ಕಾಗಿಯೇ ರೈತರು ಹೊಲಗಳಲ್ಲಿ ವಜ್ರಗಳ ಬೇಟೆಯನ್ನು ಮುಂದುವರೆಸಿದ್ದಾರೆ. ಇದೀಗ ಈ ವಜ್ರದ ಬೇಟೆ ಗುಂಟೂರಿಗೂ ಹಬ್ಬಿದೆ. ಹೌದು, ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿ ಬಸವಮ್ಮ ವಾಗುವಿನಲ್ಲಿ ವಜ್ರಗಳು ಪತ್ತೆಯಾಗಿವೆ ಎಂಬ ಪ್ರಚಾರ ಗರಿಗೆದರುತ್ತಿದೆ.