ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್

‘ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಅಗತ್ಯ ಇಲ್ಲದ ವ್ಯಕ್ತಿ. ಹೌದು ಅಥವಾ ಅಲ್ಲ’ ಎಂದು ಸುದೀಪ್ ಅವರು ಪ್ರಶ್ನೆ ಹೇಳಿದರು. ಅಚ್ಚರಿಯ ರೀತಿಯಲ್ಲಿ ರಜತ್ ಅವರು ‘ಅಲ್ಲ’ ಎಂದು ಉತ್ತರ ನೀಡಿದರು. ಇದು ನಿಜವಾಗಿಯೂ ಎಲ್ಲರಿಗೂ ಅಚ್ಚರಿ ಎನಿಸಿತು. ಸುದೀಪ್ ಕೂಡ ಅಚ್ಚರಿಪಟ್ಟರು. ತಮ್ಮ ಮಾತಿಗೆ ಕಾರಣ ಏನು ಎಂಬುದನ್ನು ಕೂಡ ರಜತ್ ಅವರು ವಿವರಿಸಿದ್ದಾರೆ.