ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಟಿವಿ9 ನೆಟ್ವರ್ಕ್ ಹಮ್ಮಿಕೊಂಡಿರುವ ಎಜುಕೇಷನ್ ಎಕ್ಸ್ಪೋ 2025ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮೂರನೇ ಮತ್ತು ಅಂತಿಮ ದಿನವಾದ ಇಂದು ಸಹಸ್ರಾರು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಎಂಜಿನಿಯರಿಂಗ್, ಮೆಡಿಸಿನ್, ಕಲೆ ಮತ್ತು ವಿಜ್ಞಾನ ಮುಂತಾದ ವಿವಿಧ ಕೋರ್ಸ್‌ಗಳ ಮಾಹಿತಿಯನ್ನು ಶಿಕ್ಷಣ ತಜ್ಞರು ಒದಗಿಸುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನವನ್ನೂ ಒದಗಿಸಲಾಗುತ್ತಿದೆ.