ಹಳೇ ಹುಬ್ಬಳ್ಳಿ ಪೊಲೀಸರು ಗೋವಾ ಕ್ರೈಂ ಬ್ರಾಂಚ್‌ನ ಅಮಿತ್ ನಾಯಕ್ ಎಂಬ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ನಟೋರಿಯಸ್ ಅಪರಾಧಿ ಸುಲೇಮಾನ್ ಸಿದ್ದಿಕಿ ಜೊತೆ ಪರಾರಿಯಾಗಿದ್ದ ನಾಯಕ್, ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ. ಸಿದ್ದಿಕಿ ಹಲವು ರಾಜ್ಯಗಳಲ್ಲಿ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಪೊಲೀಸ್ ಕಸ್ಟಡಿಯಿಂದ ಸಿದ್ದಿಕಿ ತಪ್ಪಿಸಿಕೊಂಡಾಗ ನಾಯಕ್ ಕೂಡ ಆತನೊಂದಿಗೆ ಪರಾರಿಯಾಗಿದ್ದ.