ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ

ಪ್ರಸಿದ್ಧ ವ್ಯಕ್ತಿಯ ಹುಟ್ಟು ಹಬ್ಬಕ್ಕೆ ಕೆಜಿ ಗಟ್ಟಲೇ ಕೇಕ್​​ ತಂದು ಕಟ್​ ಮಾಡಿ ಆಚರಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡದಲ್ಲಿ ಗೂಳಿಯ ಜನ್ಮದಿನಕ್ಕೆ 20 ಕೆಜಿ ಕೇಕ್​ ತಂದು ಹುಟ್ಟಿದ ಹಬ್ಬ ಆಚರಿಸಲಾಗಿದೆ.