ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಷಿತರ, ದಮನಿತರ, ಪರಿಶಿಷ್ಟ ಜಾತಿ/ ಪಂಗಡ ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಹೊಂದಿರುವ ಬಗ್ಗೆ ಅನುಮಾನವಿಲ್ಲ. ಚುನಾವಣೆಯ ಸಮಯ ಮತ್ತು ಸರ್ಕಾರ ರಚಿಸಿದ ಬಳಿಕ ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಬಡ ಜನತೆಗೆ ತಮ್ಮ ಸರ್ಕಾರ ನೆರವಾಗುತ್ತಿದ್ದರೆ ವಿರೋಧ ಪಕ್ಷಗಳಿಂದ ಯಾಕೆ ಅಡ್ಡಿ ಎಂದು ಅವರು ಸದನದಲ್ಲಿ ಪ್ರಶ್ನಿಸಿದರು.