ಕರಾಚಿಯಲ್ಲಿ ಏರ್​​ ಶೋ; ಬಾಂಬ್ ಬಿದ್ದವರಂತೆ ಭಯಭೀತರಾದ ಕಿವೀಸ್ ಪ್ಲೇಯರ್ಸ್​!

ಪಾಕಿಸ್ತಾನಿ ವಾಯುಪಡೆಯ ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದವು. ಆದರೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ಯುದ್ಧ ವಿಮಾನಗಳು ಕಾಣಿಸಿಕೊಂಡ ಕಾರಣ, ಆಟಗಾರರು ಮತ್ತು ಅಭಿಮಾನಿಗಳು ಅವುಗಳ ದೊಡ್ಡ ಶಬ್ದದಿಂದ ಆಶ್ಚರ್ಯಚಕಿತರಾದರು. ನ್ಯೂಜಿಲೆಂಡ್ ಆಟಗಾರರು ಆ ಶಬ್ದ ಕೇಳಿ ಸುತ್ತಲೂ ನೋಡಲಾರಂಭಿಸಿದರು. ಇತ್ತ ಅಭಿಮಾನಿಗಳು ಕೂಡ ಆಘಾತಕ್ಕೊಳಗಾಗಿ ತಮ್ಮ ಕೈಗಳಿಂದ ತಮ್ಮ ಕಿವಿಗಳನ್ನು ಮುಚ್ಚಿಕೊಂಡರು.