8 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್​ ವಾಪಸ್ ನೀಡಿದ ಆಟೋ ಚಾಲಕ

ಮಹಿಳೆ ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟುಹೋದ 8 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಇದ್ದ ಬ್ಯಾಗ್​ ಅನ್ನು ಆಟೋ ಚಾಲಕ ಪೊಲೀಸರು, ಆಟೋ ಚಾಲಕರ ಸಮ್ಮುಖದಲ್ಲಿ ವಾಪಸ್​ ನೀಡುವ ಮೂಲಕ ಮಾನವೀಯತೆ ಮೆರೆದಿರುವಂತಹ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸದ್ಯ ನಾಗರಾಜ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಆಟೋ ಚಾಲಕನ ಮಾನವೀಯತೆಗೆ ಪೊಲೀಸರು ಕೂಡ ಸನ್ಮಾನ ಮಾಡಿದ್ದಾರೆ.