‘ಬಿಗ್ ಬಾಸ್ ಕನ್ನಡ ಸೀಸನ್ 10’ ಸಾಕಷ್ಟು ಕುತೂಹಲ ಮೂಡಿಸಿದೆ. ಹಲವು ರೀತಿಯ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಈ ಸೀಸನ್ನಲ್ಲಿ ಸಖತ್ ಟಫ್ ಟಾಸ್ಕ್ ನೀಡಲಾಗುತ್ತಿದೆ. ಇಂದಿನ (ಅಕ್ಟೋಬರ್ 30) ಎಪಿಸೋಡ್ ಸಾಕಷ್ಟು ರೋಚಕತೆಯಿಂದ ಕೂಡಿದೆ ಎಂಬುದಕ್ಕೆ ಈಗ ರಿಲೀಸ್ ಆಗಿರುವ ಪ್ರೋಮೋ ಸಾಕ್ಷಿ. ಮನೆಯ ಆವರಣದಲ್ಲಿ ಸಾಕಷ್ಟು ಬಲೂನ್ ಇಡಲಾಗಿದೆ. ಇದನ್ನು ಒಡೆದವರಿಗೆ ಒಂದು ಚೀಟಿ ಸಿಗುತ್ತದೆ. ಡ್ರೋನ್ ಪ್ರತಾಪ್ಗೂ ಆ ಚೀಟಿ ಸಿಕ್ಕಿದೆ. ಇದನ್ನು ಮನೆಯವರು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ.