ರಾಮನಗರ ಜಿಲ್ಲೆಯ ಜನಕ್ಕೆ ತಾವು ಮಾಡಿದ ಸಹಾಯಗಳನ್ನು ಪಟ್ಟಿ ಮಾಡಲು ಮುಂದಾದ ಶಿವಕುಮಾರ್, ಮೂರ್ನಾಲ್ಕು ಹಳ್ಳಿಗಳ ಹೆಸರುಗಳನ್ನು ಹೇಳಿ ಕೆಲವು ಕಡೆ ಮೂರು, ಮತ್ತೊಂದು 5 ಎಕರೆ ಜಮೀನುಗಳನ್ನು ಶಾಲಾ ಕಾಲೇಜುಗಳನ್ನು ಕಟ್ಟಲು ದೇಣಿಗೆ ನೀಡಿದ್ದಾಗಿ ಹೇಳಿದರು. ಕೋಟ್ಯಾಂತರ ಬೆಲೆ ಬಾಳುವ ಜಮೀನನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ದಾನ ನೀಡಿದ್ದೇನೆ ಎಂದರು.