ರಾಯಚೂರು ಮಳೆ: ದಡದತ್ತ ದಂಡೆತ್ತಿ ಬಂದ ಮೊಸಳೆ ದಂಡು

ರಾಜ್ಯದೆಲ್ಲೆಡೆ ಮಳೆ ಅಬ್ಬರಿಸಿ ಬೊಬ್ಬರಿಯುತ್ತಿದೆ..ಇತ್ತ ಇಷ್ಟು ದಿನ ಸೈಲೆಂಟ್ ಆಗಿದ್ದ ಮಳೆರಾಯ ಈಗ ರಾಯಚೂರು ಜಿಲ್ಲೆಯಲ್ಲೂ ಅಬ್ಬರಿಸಲು ಶುರು ಮಾಡಿದ್ದಾನೆ..ಮತ್ತೊಂದು ಕಡೆ ಮಾಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರೋದ್ರಿಂದ ಬಾಗಲಕೋಠೆಯ ಆಲಮಟ್ಟಿ ಜಲಾಶಯಕ್ಕೆ ನೀರು ಹರಿಬಿಡಲಾಗಿತ್ತು..ಇದರ ಬೆನ್ನಲ್ಲೇ ಈಗ ಅಲ್ಲಿಂದ ಯಾದಗಿರಿಯ ಬಸವಸಾಗರ ಜಲಾಶಯಕ್ಕೆ ನೀರು ಬಿಡಲಾಗಿದೆ..ನಿನ್ನೆಯಿಂದ ಈಗ ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರಲ್ಲ ಬಿಡಲಾಗಿದ್ದು ರಾಯಚೂರು ಜಿಲ್ಲೆಯ ಲಿಂಗಸುಗೂರು,ದೇವದುರ್ಗ ಹಾಗೂ ರಾಯಚೂರು ತಾಲ್ಲೂಕಿನ ವ್ಯಾಪ್ತಿ ಅಲರ್ಟ್ ಮಾಡಲಾಗಿದೆ..ಕೃಷ್ಣಾ ನದಿ ತಿರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಸಿಲು ಸೂಚಿಸಲಾಗಿದೆ..ಈ ಮಧ್ಯೆ ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದ ಕೃಷ್ಣಾ ನದಿ ತೀರದಲ್ಲಿ 20 ಕ್ಕು ಹೆಚ್ಚು ಮೊಸಳೆಗಳ ದಂಡು ಒಂದೇ ಕಡೆ ಬಂದು ಕೂತಿದ್ವು..ಆ ವಿಡಿಯೋ ವೈರಲ್ ಆಗಿತ್ತು..ಈಗ ಆ ಪ್ರದೇಶದಲ್ಲಿ ಓಡಾಡದಂತೆ ಸೂಚಿಸಲಾಗಿದೆ..ಆತ್ಕೂರು ಬಳಿಯ ಕುರುಕವಕಲಾ ನಡುಗಡ್ಡೆ ಪ್ರದೇಶಕ್ಕೆ ಬ್ರಿಡ್ಜ್ ಇಲ್ಲದಿರೋದ್ರಿಂದ ಸಾಕಷ್ಟು ಸಮಸ್ಯೆ ಆಗ್ತಿದೆಯಂತೆ..