ಜಪಾನ್ನಲ್ಲಿ ಡಾ. ರಾಜ್ಕುಮಾರ್ ಹುಟ್ಟುಹಬ್ಬ ಆಚರಿಸಿದ ಫ್ಯಾನ್ಸ್

ಇಂದು (ಏಪ್ರಿಲ್ 24) ವರನಟ ಡಾ. ರಾಜ್ಕುಮಾರ್ ಜನ್ಮದಿನ. ಅವರ ಬರ್ತ್ಡೇನ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶೇಷ ಎಂದರೆ ದೂರದ ಜಪಾನ್ನಲ್ಲೂ ರಾಜ್ಕುಮಾರ್ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಅಲ್ಲಿರುವ ರಾಜ್ ಅಭಿಮಾನಿಗಳು ಅಣ್ಣಾವ್ರ ಫೋಟೋದ ಎದುರು ಕೇಕ್ ಇಟ್ಟು ಕತ್ತರಿಸಿದ್ದಾರೆ. ಈ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಬರ್ತ್ಡೇ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಬಳಿ ಜನರು ನೆರೆದಿದ್ದಾರೆ. ಕುಟುಂಬದವರು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.