ಲೋಕಾಯುಕ್ತ ಕಚೇರಿಗೆ ಆಗಮಿಸುತ್ತಿರುವ ಸಿದ್ದರಾಮಯ್ಯ

ಲೋಕಾಯುಕ್ತ ಕಚೇರಿ ಆವರಣ ಪ್ರವೇಶಿಸುವಾಗ ಮುಖ್ಯಮಂತ್ರಿಯವರ ಮುಖದಲ್ಲಿ ಆತಂಕ, ದುಗುಡ ಕಾಣಲಿಲ್ಲ, ಅವರು ನಿರಾಳರಾಗಿದ್ದರು. ಆದರೆ, ಲೋಕಾಯುಕ್ತ ಅಧಿಕಾರಿಗಳು ನಡೆಸುವ ವಿಚಾರಣೆಯ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ತನಿಖೆ ಸರಿಯಾದ ನಿಟ್ಟಿನಲ್ಲಿ ಸಾಗಲಾರದು ಅಂತ ಕೃಷ್ಣ ಹೇಳಿದ್ದಾರೆ.