ನಟ ಧರ್ಮ ಕೀರ್ತಿರಾಜ್ ಅವರು ಬಿಗ್ ಬಾಸ್ ಮನೆಯಲ್ಲಿ ಬೇಸರ ಮಾಡಿಕೊಂಡಿದ್ದಾರೆ. ಸುದೀಪ್ ಎದುರಿನಲ್ಲೇ ಧರ್ಮಗೆ ಅನೇಕರು ನಾಲಾಯಕ್ ಎಂದಿದ್ದಾರೆ. ಈ ಮಾತನ್ನು ಕೇಳಿಸಿಕೊಂಡು ಧರ್ಮ ಅವರು ನೊಂದುಕೊಂಡಿದ್ದಾರೆ. ಭಾನುವಾರದ (ನವೆಂಬರ್ 10) ಸಂಚಿಕೆಯಲ್ಲಿ ಈ ಘಟನೆ ನಡೆದಿದೆ. ಅದರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.