ಪ್ರಿಯತಮೆಗಾಗಿ ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ಅಥವಾ ಕಳೆದುಹೋದ ಬೈಕ್, ಇನ್ನಾವುದೋ ಕಾರಣಕ್ಕಾಗಿ ಯುವಕರು ಪೊಲೀಸ್ ಠಾಣೆಗೆ ಅಲಿಯುತ್ತಿರುತ್ತಾರೆ. ಆದರೆ ಹಾವೇರಿ ನಗರದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಇಬ್ಬರು ಯುವಕರು ನಾಯಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.