ಮೈಸೂರಲ್ಲಿ ಲಾರಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಲಾರಿ ಮಾಲೀಕರೊಬ್ಬರು ಡೀಸೆಲ್ ಬೆಲೆ ಇಳಿಸದ ಹೊರತು ಲಾರಿ ಮುಷ್ಕರ ನಿಲ್ಲುವ ಚಾನ್ಸೇ ಇಲ್ಲ ಎನ್ನುತ್ತಾರೆ. ಡೀಸೆಲ್ ಬೆಲೆ ಹೆಚ್ಚಾದರೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತದೆ ಅನ್ನೋದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರ್ಥಮಾಡಿಕೊಳ್ಳಬೇಕು, ನಮಗ್ಯಾವ ಸರ್ಕಾರವೂ ಬೇಡ, ನಮ್ಮದು ಲಾರಿ ಸರ್ಕಾರ; ಕಾರ್ಮಿಕರು ಮತ್ತು ನಾಳೆಯಿಂದ ಆಟೋದವರೂ ತಮ್ಮೊಂದಿಗೆ ಧರಣಿಗೆ ಇಳಿಯುತ್ತಿದ್ದಾರೆ ಎಂದು ಅವರು ಹೇಳಿದರು.