ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಸ್ಪರ್ಧಿಗಳ ಮೇಲೆ ಅಬ್ಬರಿಸಿದ ಕಿಚ್ಚ

ಬಿಗ್​ಬಾಸ್ ಕನ್ನಡ ಸೀಸನ್ 11 ರ ಎರಡನೇ ವಾರದ ಪಂಚಾಯ್ತಿ ಇಂದು (ಅಕ್ಟೋಬರ್ 12) ನಡೆಯಲಿದೆ. ಕಳೆದ ವಾರ ಲಾಯರ್ ಜಗದೀಶ್ ಮೇಲೆ ಅಬ್ಬರಿಸಿದ್ದ ಕಿಚ್ಚ ಸುದೀಪ್, ಎರಡನೇ ವಾರವೂ ಸಹ ಕೆಲ ಸ್ಪರ್ಧಿಗಳ ಮೇಲೆ ಅಬ್ಬರಿಸಿರುವುದು ಹೊಸ ಪ್ರೋಮೋದಿಂದ ತಿಳಿದು ಬರುತ್ತಿದೆ. ರಾತ್ರಿ 9ಕ್ಕೆ ಎಪಿಸೋಡ್ ಪ್ರಸಾರ ಆಗಲಿದೆ.