ನಾಲ್ಕು ವರ್ಷಗಳ ಹಿಂದೆ ಸೆಟ್ಟೇರಿದ್ದ ‘ಗ್ರಾಮಾಯಣ’ಕ್ಕೆ ಮತ್ತೆ ಮುಹೂರ್ತ; ವಿನಯ್ ರಾಜ್ಕುಮಾರ್ ಹೇಳಿದ್ದಿಷ್ಟು

ನಾಲ್ಕು ವರ್ಷಗಳ ಹಿಂದೆ ‘ಗ್ರಾಮಾಯಣ’ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ವಿನಯ್ ರಾಜ್ಕುಮಾರ್ ಅವರು ಈ ಚಿತ್ರಕ್ಕೆ ಹೀರೋ ಆಗಿ ಆಯ್ಕೆ ಆಗಿದ್ದರು. ಆದರೆ, ಕಾರಣಾಂತರಗಳಿಂದ ಸಿನಿಮಾ ಕೆಲಸಗಳು ನಿಂತವು. ಈಗ ‘ಗ್ರಾಮಾಯಣ’ ಸಿನಿಮಾ ಮತ್ತೆ ಸೆಟ್ಟೇರಿದೆ. ಈ ಬಗ್ಗೆ ವಿನಯ್ ಮಾತನಾಡಿದ್ದಾರೆ. ‘ಸಿನಿಮಾ ನಿಲ್ಲೋಕೆ ನಾನು ಕಾರಣ ಆಗಿರಲಿಲ್ಲ. ಹೀಗಾಗಿ ನನಗೆ ಆ ಬಗ್ಗೆ ತಪ್ಪಿತಸ್ಥ ಭಾವನೆ ಇಲ್ಲ. ಆದರೆ, ಸಿನಿಮಾ ನಿಂತ ಬಗ್ಗೆ ಬೇಸರ ಇತ್ತು’ ಎಂದಿದ್ದಾರೆ ಅವರು.