ಅರ್ ಅಶೋಕ ಅವರು ಅತ್ಯಂತ ವಿವೇಚನೆಯಿಂದ ಮಾತಾಡುವುದನ್ನು ಗಮನಿಸಬಹುದು. ಇದು ಬಹಳ ಸೂಕ್ಷ್ಮ ವಿಷಯವಾಗಿರುವುದರಿಂದ ಹಾಗೆ ಅಳೆದು ತೂಗಿ ಮಾತಾಡಬೇಕಾಗುತ್ತದೆ. ಸರಕಾರದ ವೈಫಲ್ಯ ಅಂತ ಹೇಳಿ ಅದರ ತಲೆ ಮೇಲೆ ಗೂಬೆ ಕೂರಿಸೋದು ಸುಲಭ, ಆದರೆ ವಿರೋಧ ಪಕ್ಷದ ನಾಯಕ ಹಾಗೆ ಮಾಡಲಿಲ್ಲ. ವಿರೋಧ ಪಕ್ಷದ ನಾಯಕನನ್ನು ಶ್ಯಾಡೋ ಚೀಫ್ ಮಿನಿಸ್ಟರ್ ಅಂತ ಹೇಳತ್ತಾರೆ, ಅಶೋಕ ಅದರ ಸ್ಥಾನದ ಘನತೆಗೆ ತಕ್ಕಂತೆ ಮಾತಾಡಿದ್ದಾರೆ.