ಜಿಲ್ಲೆಯ ನಂಜನಗೂಡನನ್ನು ದಕ್ಷಿಣದ ಕಾಶಿ ಅಂತ ಕರೆಯುವುದು ಕನ್ನಡಿಗರಿಗೆ ಗೊತ್ತಿಲ್ಲದೇನಿಲ್ಲ. ಪಂಚರಥಗಳ ಮೆರವಣಿಗೆ ವರ್ಷಕ್ಕೊಮ್ಮೆ ನಡೆಯುವ ಮಹಾಮೇಳ. ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಿಂದಲೂ ಭಕ್ತಾದಿಗಳು ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ನಂಜನಗೂಡನ್ನು ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆಯಂತೂ ಇದೆ. ಭಕ್ತಾದಿಗಳಿಗೆ ಉಳಿದುಕೊಳ್ಳಲು ಒಳ್ಳೊಳ್ಳೆ ಹೋಟೆಲ್ಗಳ ಅಗತ್ಯವಿದೆ.