ಹಾಸನ ಉಸ್ತುವಾರಿ ಸಚಿವ ಎಲ್ಲಿದಿಯಪ್ಪಾ? ಸಚಿವ ರಾಜಣ್ಣ ವಿರುದ್ಧ ಮಾಜಿ ಶಾಸಕ ಲಿಂಗೇಶ್ ಹೀಗೆ ವಾಗ್ದಾಳಿ ನಡೆಸಿದ್ದೇಕೆ?

ಹಾಸನ ತಾಲ್ಲೂಕಿನ ಹೇಮಾವತಿ ಜಲಾಶಯದ ಎದುರು ನಡೆಯುತ್ತಿರೊ ಪ್ರತಿಭಟನೆಯಲ್ಲಿ ಹಾಸನ ಉಸ್ತುವಾರಿ ಸಚಿವ ಎಲ್ಲಿದಿಯಪ್ಪಾ? ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ಹೇಗಪ್ಪಾ ನೀರು ಬಿಟ್ರಿ? ನಿಮ್ಮ ಜಿಲ್ಲೆಗೆ ಹನ್ನೊಂದು ಟಿಎಂಸಿ ನೀರು ಬಿಟ್ಕೊಂಡ್ರಿ. ಹಾಸನ‌ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿ ನೀರು ಹರಿಸಲಾಗಿದೆ. ಏನೇನೊ ‌ಭಾಗ್ಯ ಕೊಟ್ಟಿರಿ, ನೀರಿನ ಭಾಗ್ಯ ಬೇಡವೇ? ಎಂದು ಸರ್ಕಾರದ ವಿರುದ್ಧ ಮತ್ತು ಹಾಸನ ಉಸ್ತುವಾರಿ ಸಚಿವ ರಾಜಣ್ಣ ವಿರುದ್ಧ ಮಾಜಿ ಶಾಸಕ ಲಿಂಗೇಶ್ ವಾಗ್ದಾಳಿ ನಡೆಸಿದ್ದಾರೆ.