ನಟಿ ಪವಿತ್ರಾ ಗೌಡ, ನಟ ದರ್ಶನ್ ಸೇರಿದಂತೆ ಅನೇಕರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಎಲ್ಲರ ಪೊಲೀಸ್ ಕಸ್ಟಡಿ ಮುಂದುವರಿದಿದೆ. ಇಂದು (ಜೂನ್ 16) ಬೆಂಗಳೂರಿನ ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಮಹಜರು ಮಾಡಿದ್ದಾರೆ. ಸುಮಾರು 10 ವರ್ಷದಿಂದ ಇದೇ ಮನೆಯಲ್ಲಿ ಪವಿತ್ರಾ ಗೌಡ ವಾಸವಾಗಿದ್ದಾಳೆ. ಇದು ಮೂರು ಫ್ಲೋರ್ನ ಡುಪ್ಲೆಕ್ಸ್ ಮನೆ. ಕೆಳಗಡೆ ಪಾರ್ಕಿಂಗ್ಗೆ ಜಾಗ ಹಾಗೂ ಇನ್ನೋರ್ವ ಆರೋಪಿ ಪವನ್ ಇರುತ್ತಿದ್ದ ಮನೆ ಇದೆ. ಈತ ಪವಿತ್ರಾ ಗೌಡಗೆ ಮನೆ ಕೆಲಸಗಾರ ಹಾಗೂ ನಾಯಿಯನ್ನ ನೋಡಿಕೊಳ್ಳುತ್ತಿದ್ದ. ಅಕ್ಕಪಕ್ಕ ಮನೆಯವರ ಜೊತೆಗೆ ಪವಿತ್ರಾಗೆ ಸಂಪರ್ಕವೇ ಇರಲಿಲ್ಲ. ಪವಿತ್ರಾ ಫೋಕ್ಸ್ ವ್ಯಾಗನ್ ಹಾಗೂ ರೇಂಜ್ ರೋವರ್ನಲ್ಲಿ ಓಡಾಡುತ್ತಿದ್ದಳು. ಪವಿತ್ರಾ ಗೌಡ ಮಗಳು ಹಾಸ್ಟೆಲ್ನಲ್ಲಿ ಇದ್ದಳು. ಆಗಾಗ ಇಲ್ಲಿಗೆ ಬರುತ್ತಿದ್ದಳು. ಮೊದಮೊದಲು ದರ್ಶನ್ ಈ ಮನೆಗೆ ಬರೋದನ್ನ ನೋಡಿ ಇಲ್ಲಿ ವಿಜಯಲಕ್ಷಿ ಇದ್ದಾರೆ ಅಂತ ಅಕ್ಕಪಕ್ಕದ ಮನೆಯವರು ಅಂದುಕೊಂಡಿದ್ದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹೊಸ ಹೊಸ ವಿಚಾರಗಳು ಒಂದೊಂದಾಗಿಯೇ ಹೊರಬರುತ್ತಿವೆ.