ಪಂಜಾಬ್ನ ಭಟಿಂಡಾ ಬಳಿ ಇರುವ ಮೌರ್ ಮಂಡಿಯಲ್ಲಿ ಭಾನುವಾರ ನಡೆದ ಆಘಾತಕಾರಿ ಘಟನೆಯಲ್ಲಿ 40 ವರ್ಷದ ಜಸ್ಪಾಲ್ ಸಿಂಗ್ ಅಥಿಯಾನಿ ಎಂಬಾತನ ಮೇಲೆ ಇಬ್ಬರು ವ್ಯಕ್ತಿಗಳು ಚೂಪಾದ ಆಯುಧಗಳಿಂದ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದಾರೆ. ಅಥಿಯಾನಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.