ಅಬ್ಬಿ ಜಲಪಾತ ಬಳಿ ಗೃಹಿಣಿ ನಾಪತ್ತೆ, NDRF ತಂಡದಿಂದ ಶೋಧ ಕಾರ್ಯ

ಕೊಡಗು: ಡೆತ್ ನೋಟ್ ಬರೆದಿಟ್ಟು ಮಹಿಳೆ ನಾಪತ್ತೆ ಪ್ರಕರಣದಲ್ಲಿ ಮಡಿಕೇರಿಯ ಅಬ್ಬಿ ಜಲಪಾತದ ಬಳಿ ಮಹಿಳೆಯ ಚಪ್ಪಲಿ ಮತ್ತು ದಾಖಲೆಗಳು ಪತ್ತೆಯಾಗಿವೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರ ನಿವಾಸಿ ಸರಸ್ವತಿ (33) ನಾಪತ್ತೆಯಾಗಿದ್ದಾರೆ. ಸರಸ್ವತಿಯ ಚಪ್ಪಲಿ ಮತ್ತು ಕೆಲ‌ ದಾಖಲೆಗಳು ಅಬ್ಬಿ ಜಲಪಾತ ಬಳಿ ಪತ್ತೆಯಾಗಿವೆ.