ಹೈವೇಯಲ್ಲಿ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹೋಟೆಲ್​​ಗೆ ನುಗ್ಗಿತು

ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹೋಟೆಲ್​ಗೆ ನುಗ್ಗಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ. ಅತಿ ವೇಗದಲ್ಲಿ ಹೋಗುತ್ತಿದ್ದ ಸ್ವಿಫ್ಟ್​ ಕಾರು ರಾಷ್ಟ್ರೀಯ ಹೆದ್ದಾರಿ 9ರಲ್ಲಿರುವ ಹೋಟೆಲ್​ಗೆ ನುಗ್ಗಿದೆ. ವ್ಯಕ್ತಿಯೊಬ್ಬರು ಫುಡ್ ಕೋರ್ಟ್​ ಮುಂದೆ ಮೆಟ್ಟಿಲುಗಳ ಮೇಲೆ ನಿಂತಿರುವುದನ್ನು ಕಾಣಬಹುದು.