ಪತ್ನಿ ಫ್ರೀ ಬಸ್ನಲ್ಲಿ ತವರಿಗೆ ಹೋಗಿದ್ದನ್ನ ಕಂಡು ಸಿಟ್ಟಿಗೆದ್ದ ಕುಡುಕ ಗಂಡ ಕೆಎಸ್ಆರ್ಟಿಸಿ ಸಿಬ್ಬಂದಿ ಮೇಲೆ ಚಾಕು, ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಉಚಿತ ಬಸ್ ಇದೆ ಎಂದು ತನಗೆ ಹೇಳದೆ ಪತ್ನಿ ತವರಿಗೆ ಹೊಗಿದ್ದಾಳೆ ಎಂದು ಚಿಕ್ಕಸಂದ್ರದ ನಾಗ ಎಂಬಾತ ಸಿಟ್ಟಿಗೆದ್ದು ರಂಪಾಟ ನಡೆಸಿದ್ದಾನೆ.