ಕಿಲೋಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್ ಅಂದ್ರೆ ಇದೇ!

ಮುಂದೆ ಎಲ್ಲೋ ನಡುರಸ್ತೆಯಲ್ಲಿ ಲಾರಿಯೊಂದು ಕೆಟ್ಟು ನಿಂತಿರುವ ಕಾರಣ ಹೆದ್ದಾರಿಯ ನೆಲಮಂಗಲ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಾಗಾದರೆ, ಪೊಲೀಸು ಏನು ಮಾಡುತ್ತಿದ್ದಾರೆ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ನಮ್ಮ ವರದಿಗಾರ ಕೆಟ್ಟು ನಿಂತಿರುವ ಲಾರಿಯ ಜೊತೆ ಸಂಚಾರಿ ಪೊಲೀಸರನ್ನೂ ಹುಡುಕಿದ್ದಾರೆ. ಲಾರಿಯ ಹಾಗೆ ಅವರೂ ಸಿಕ್ಕಿಲ್ಲ!