ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪಂಚಮಸಾಲಿ ಸಮುದಾಯದ ಸುಮಾರು 2 ಲಕ್ಷ ಸೇರಿದ್ದರೂ, ಹಿಂಸೆಗೆ ಆಸ್ಪದ ನೀಡದ ಹಾಗೆ ಪರಿಸ್ಥಿಯನ್ನು ನಿಭಾಯಿಸಲಾಗಿತ್ತು, ಪಂಚಮಸಾಲಿ ಸಮುದಾಯ ಪರ ಹೋರಾಟ ಮಾಡುತ್ತಿರುವ ಸ್ವಾಮೀಜಿ ಬಿಜೆಪಿಯವರೇ ಅಂತ ಪ್ರಶ್ನಿಸಲಾಗುತ್ತಿದೆ, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದಾಕ್ಷಣ ಅವರು ಬಿಜೆಪಿಯವರಾಗಿ ಬಿಡುತ್ತಾರೆಯೇ ಎಂದು ಅಶೋಕ ಕೇಳಿದರು.