ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ಉಚಿತ ಸ್ಕೀಂಗೆ ಮಹಿಳೆಯರು ಛೀಮಾರಿ ಹಾಕುತ್ತಿದ್ದಾರೆ. ವಿದ್ಯುತ್ ಬಿಲ್ ಅಧಿಕ ಬಂದಿರುವ ಹಿನ್ನೆಲೆ ಕೀಲಾರ ಗ್ರಾಮದ ಚೆಸ್ಕಾಂ ವಿರುದ್ಧ ಆಕ್ರೋಶ ಹೊರಹಾಕಿದ ಮಂಡ್ಯದ ಬಡ ವೃದ್ಧೆ ನಿರ್ಮಲಾ, 350 ಬಿಲ್ ಬಂದಿದೆ 700 ರೂ. ಕಟ್ಟಿ ಅಂತಾರೆ. ನಾವು ಯಾವ ಬಾಕಿನೂ ಉಳಿಸಿಕೊಂಡಿಲ್ಲ. ಇವಾಗ 700 ರೂಪಾಯಿ ಎಲ್ಲಿಂದ ತರಲಿ? ಸಿದ್ದರಾಮಯ್ಯ ಬರಲಿ, ಹೆಂಗಸರು ಹೊಡಿಯುತ್ತಾರೆ. ಅವನು ನಮ್ಮ ತಲೆ ಮೇಲೆ ಹಾಕಿದ್ದಾನೆ. ಫ್ರೀ ಅಂತ ಹೇಳಿ ವೋಟು ಹಾಕಿಸಿಕೊಂಡು ಗೆದ್ದುಬಿಟ್ಟ. ಈಗ ನಾಟಕ ಮಾಡಿಕೊಂಡು ಕೂತಿದ್ದಾನೆ ಎಂದಿದ್ದಾರೆ.