‘ಗುಡ್​ ಟು ಸೀ ಯೂ ಮೈ ಬಾಯ್’; ಅಭಿನ ನೋಡಿ ಖುಷಿಯಿಂದ ಮಾತನಾಡಿದ ಚಿರಂಜೀವಿ

ಟಾಲಿವುಡ್ ಸ್ಟಾರ್ ನಟ ಚಿರಂಜೀವಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿಡಪ ಅವರ ಆರತಕ್ಷತೆಯಲ್ಲಿ ಭಾಗಿ ಆಗಿದ್ದಾರೆ. ಅದ್ದೂರಿ ರಿಸೆಪ್ಷನ್​​ನಲ್ಲಿ ದಂಪತಿಗೆ ಒಳ್ಳೆಯದಾಗಲಿ ಎಂದು ಅವರು ಕೋರಿದರು. ರಿಸೆಪ್ಷನ್ ಮುಗಿದ ಬಳಿಕ ಮಾತನಾಡಿದ್ದ ಅಭಿಷೇಕ್ ಅವರು ಚಿರಂಜೀವಿ ಏನು ಹೇಳಿದರು ಎಂಬುದನ್ನು ವಿವರಿಸಿದ್ದಾರೆ. ‘ಗುಡ್ ಟು ಸೀ ಯೂ ಮೈ ಬಾಯ್ ಎಂದು ಚಿರಂಜೀವಿ ಹೇಳಿದರು. ಗಲಾಟೆ ಮಧ್ಯೆ ಮತ್ತೇನು ಕೇಳಿಸಿಲ್ಲ’ ಎಂದರು ಅಭಿ.