ಮುಖ್ಯಮಂತ್ರಿ ಸಿದ್ದರಾಮಯ್ಯ, ಪುನೀತ್ ರಾಜಕುಮಾರ ಅಭಿಮಾನ ಮದುವೆ ಮನೆಯಲ್ಲೂ ಮೇಳೈಸಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಂಡಿಹಾಳ ಗ್ರಾಮದಲ್ಲಿ ಗುರುವಾರ (ಫೆ.29) ರಾತ್ರಿ ನಡೆದ ಮದುವೆ ಮೆರವಣಿಗೆಯಲ್ಲಿ ನವದಂಪತಿಗಳಾದ ಗವಿಸಿದ್ದಪ್ಪ ಮತ್ತು ಕಾವ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟ ಪುನೀತ್ ರಾಜಕುಮಾರ್ ಪೋಟೋಗಳಿಗೆ ಹಾಲಿನ ಅಭಿಷೇಕ ಮಾಡಿದರು.