ಥಾರ್​ ಖರೀದಿಸಿದ ಖುಷಿಗೆ ಮಹೀಂದ್ರಾ ಶೋರೂಂನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಯುವಕ!

ಮಹೀಂದ್ರ ಥಾರ್ ರೋಕ್ಸ್ ಖರೀದಿಸಿದ್ದನ್ನು ಸಂಭ್ರಮಿಸಲು ವ್ಯಕ್ತಿಯೊಬ್ಬ ಕಾರಿನ ಸನ್​ರೂಫ್​ನಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಹೂವಿನಿಂದ ಅಲಂಕೃತವಾದ ಥಾರ್ ರೋಕ್ಸ್ ಮೇಲೆ ನಿಂತಿರುವ ವ್ಯಕ್ತಿ ಗನ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.