ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ

ನಿಮಗೆ ನೆನಪಿರಬಹುದು, 2023 ರ ಚುನಾವಣೆಯಲ್ಲಿ ಕಾಂಗ್ರೆಸ್ 135 ಸೀಟುಗಳನ್ನು ಕಾಂಗ್ರೆಸ್ ಗೆದ್ದಾಗ ದೆಹಲಿಯಲ್ಲಿ ಹೆಚ್ಚು ಕಡಿಮೆ ಇಂಥ ದೃಶ್ಯಗಳು ಕಾಣುತ್ತಿದ್ದವು. ಆಗ ತಾನೇ ಮುಖ್ಯಮಂತ್ರಿಯಾಗಬೇಕೆಂಬ ಜಿದ್ದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಇತ್ತು, ಈಗ ಅದೇ ಜಿದ್ದು ಕೊಂಚ ಭಿನ್ನ ರೀತಿಯಲ್ಲಿ ಮುಂದುವರಿದೆ. ಸ್ಥಾನ ಉಳಿಸಿಕೊಳ್ಳಲು ಮತ್ತು ಪಡೆದುಕೊಳ್ಳಲು ಸಂಘರ್ಷ ನಡೆದಿದೆ.