ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಮುರಳಿ

ನಟ ಶ್ರೀಮುರಳಿ ಇಂದು (ಡಿಸೆಂಬರ್ 17) ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಶ್ರೀಮುರಳಿ ಅವರ 43ನೇ ವರ್ಷದ ಹುಟ್ಟುಹಬ್ಬಕ್ಕೆ ಅವರು ಅಭಿಮಾನಿಗಳು ಶುಭ ಕೋರಿದ್ದಾರೆ. ಅಭಿಮಾನಿಗಳು ತಂದಿದ್ದ ಕೇಕ್ ಕತ್ತಿರಿಸಿ, ಅಭಿಮಾನಿಗಳು ಹಾಕಿದ ಭಾರಿ ಹೂ ಹಾರಗಳನ್ನು ಹಾಕಿಸಿಕೊಂಡು ಶ್ರೀಮುರಳಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.