ಚಿತ್ರದುರ್ಗ: ಅಪರೂಪದ ಪ್ರಕರಣದಲ್ಲಿ ಹೊಳಲ್ಕೆರೆಯಲ್ಲಿ ಮೃತ ಅರ್ಚಕರ ಮನೆಯಲ್ಲಿ (house) ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿರುವ ಮನೆಯ ವಿವಿಧೆಡೆ ಇರಿಸಿದ್ದ 30 ಲಕ್ಷ ರೂಪಾಯಿಗೂ ಅಧಿಕ ಹಣ ಸಿಕ್ಕಿದೆ. ಹೊಳಲ್ಕೆರೆಯಲ್ಲಿ ವಾರದ ಹಿಂದೆ ಗಂಗಾಧರ ಶಾಸ್ತ್ರಿ (70) ಮೃತಪಟ್ಟಿದ್ದರು (Death). ಗಂಗಾಧರ ಶಾಸ್ತ್ರಿ ಒಂಟಿಯಾಗಿ ಬದುಕು ಸವೆಸಿದ್ದರು. ಶಾಸ್ತ್ರಿಗಳು ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. ಗಂಗಾಧರ ಶಾಸ್ತ್ರಿ 16 ಎಕರೆ ಜಮೀನಿದ್ದು, 4 ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು.