ಕಾವೇರಿ ಕಿಚ್ಚು ಜೋರಾಗಿದೆ. ಈ ಹೋಟಾರಕ್ಕೆ ಸೆಲೆಬ್ರಿಟಿಗಳು ಸರಿಯಾಗಿ ಬೆಂಬಲ ನೀಡಲ್ಲ ಎಂದು ಅನೇಕರು ತಕರಾರು ತೆಗೆದಿದ್ದಿದೆ. ಈ ವಿಚಾರವಾಗಿ ನಟ ದರ್ಶನ್ ಅವರು ಮಾತನಾಡಿದ್ದಾರೆ. ‘ಇತ್ತೀಚೆಗೆ ತಮಿಳು ಸಿನಿಮಾ ಒಂದು ರಿಲೀಸ್ ಆಯ್ತು. ಈ ಸಿನಿಮಾದ ಹಂಚಿಕೆ ಹಕ್ಕನ್ನು ಆರು ಕೋಟಿ ರೂಪಾಯಿಗೆ ತೆಗೆದುಕೊಂಡು, 36 ಕೋಟಿ ರೂಪಾಯಿ ಲಾಭ ಮಾಡಿದರು. ಅವರನ್ನು ಹೋಗಿ ನೀವೇಕೆ ಕೇಳುತ್ತಿಲ್ಲ? ನಿಮಗೆ ದರ್ಶನ್, ಸುದೀಪ್, ಯಶ್, ಶಿವಣ್ಣ ಮಾತ್ರ ಕಾಣೋದಾ? ಅವರನ್ನೂ ಹೋಗಿ ಕೇಳಿ’ ಎಂದಿದ್ದಾರೆ ದರ್ಶನ್. ಅವರು ಸುದೀಪ್ ಹೆಸರು ಹೇಳುತ್ತಿದ್ದಂತೆ ಅಭಿಮಾನಿಗಳು ಕೂಗಿದರು.