ಪಲ್ಲಕ್ಕಿ ಉತ್ಸವ ಬಸ್ ಗಳು ಪಲ್ಲಕ್ಕಿಯಲ್ಲಿ ಸಾಗುವಾಗ ಸಿಗಬಹುದಾಗಿದ್ದ ಸಂತೋಷವನ್ನು ಪ್ರಯಾಣಿಕರಿಗೆ ನೀಡುತ್ತವೆ; ಹಾಗಾಗಿ, ಸಂತೋಷ ಪ್ರಯಾಣಿಸುತ್ತಿದೆ ಎಂಬ ಟ್ಯಾಗ್ ಲೈನ್ ವಾಹನಗಳಿಗೆ ನೀಡಲಾಗಿದೆ. ಬಸ್ ಗಳ ಪಾರ್ಶ್ವದಲ್ಲಿ ಪಲ್ಲಕ್ಲಿ ಹೊತ್ತಿರುವ ಚಿತ್ರವನ್ನೂ ನೋಡಬಹುದು. ಅನ್ಬುಕುಮಾರ್ ಹೇಳುವ ಹಾಗೆ ಬಸ್ ಅರಾಮದಾಯಕ ಪ್ರಯಾಣದ ಫೀಲ್ ಪ್ರಯಾಣಿಕರಿಗೆ ನೀಡುತ್ತವೆ ಮತ್ತು ಅವರ ಪರ್ಸ್ ಮೇಲೆ ಹೊರೆಯೆನಿಸಲ್ಲ.