ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಭೇಟಿ ನೀಡಿದ್ದು, 3,880 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. 3384 ಕೋಟಿ ರೂ. ಮೌಲ್ಯದ 44 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದರು. ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಎಂಟು ವರ್ಷಗಳನ್ನು ಪೂರೈಸಿದ ನಂತರ ಪ್ರಧಾನಿಯವರ ಮೊದಲ ಭೇಟಿ ಇದಾಗಿದೆ.